'ನನ್ನ ಕನಸಿನ ಕರ್ನಾಟಕದಲ್ಲಿ ಯುವಕರಿಗೆ ಕೌಶಲ್ಯ ಆಧಾರಿತ ತರಬೇತಿ ಸಿಗಬೇಕು. ಯುವಕರಿಗೆ ಉದ್ಯೋಗ ಸೃಷ್ಟಿಯಾಗಬೇಕು' ಎಂದು ಸೊರಬ ಕ್ಷೇತ್ರದ ನಿವಾಸಿ ನೀಲಕಂಠ ಶೇಷಗಿರಿ ಹೇಳಿದರು. ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ನೀಲಕಂಠ ಶೇಷಗಿರಿ ಅವರು, ಕನಸಿನ ಕರ್ನಾಟಕ ಹೇಗಿರಬೇಕು? ಎಂಬ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡರು. 'ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಜನರು ಸಹ ಭರವಸೆ ಇಟ್ಟು ಮತದಾನ ಮಾಡುತ್ತಾರೆ' ಎಂದರು.